ಔರಾದ್: ಹುಯಿಲಗೋಳ ನಾರಾಯಣರ ನಾಡ ಪ್ರೇಮ ಎಲ್ರಿಗೂ ಆದರ್ಶ : ಪಟ್ಟಣಲ್ಲಿ ವೈದ್ಯ ಡಾ. ವೈಜಿನಾಥ ಬುಟ್ಟೆ
Aurad, Bidar | Oct 16, 2025 ಹುಯಿಳಗೊಳ ನಾರಾಯಣರ ನಾಡು ನುಡಿ ಪ್ರೇಮ ಸರ್ವರಿಗೂ ಆದರ್ಶ ಎಂದು ವೈದ್ಯ ಡಾ. ವೈಜಿನಾಥ ಬುಟ್ಟೆ ಅವರು ಅಭಿಪ್ರಾಯಪಟ್ಟರು. ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಗುರುವಾರ ಮದ್ಯಾಹ್ನ 3:30ಕ್ಕೆ ಏರ್ಪಡಿಸಿದ್ದ ಹುಯಿಳಗೊಳ ನಾರಾಯಣರ ಜನ್ಮೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾಂಸ್ಕೃತಿಕ ಚಿಂತಕ ಜಗನ್ನಾಥ ಮೂಲ್ಗೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿಎಂ ಅಮರವಾಡಿ, ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಟಂಕಸಾಲೆ ಮಾತನಾಡಿದರು.