ಸಿರವಾರ: ಕವಿತಾಳ : ಕಾಮಗಾರಿ ನಡೆಯುವಾಗಲೇ ಕಿತ್ತು ಬರುತ್ತಿರುವ ಡಾಂಬರ್
Sirwar, Raichur | Oct 20, 2025 1 ಕೋಟಿ ವೆಚ್ಚದಲ್ಲಿ ಕೈಗೊಂಡ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ ಕಾಮಗಾರಿಯನ್ನು ವಹಿಸಿಕೊಂಡ ಭೂಸೇನಾ ನಿಗಮದ ಅಧಿಕಾರಿಗಳು ಆನ್ವರಿ ಸಂಪರ್ಕಿಸುವ ಮುಖ್ಯ ರಸ್ತೆಯಿಂದ ಕಡ್ಡೋಣಿ ಕ್ರಾಸ್ವರೆಗೆ ನಡೆದ ರಸ್ತೆ ದುರಸ್ತಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಇರವಾರ ತಾಲ್ಲೂಕಿಗೆ ಒಳಪಡುವ ಗ್ರಾಮದಲ್ಲಿ ನೆಲ ಅಗೆಯದೇ ಕಂಕರ್ ಮತ್ತು ಮರಂ ಹರಡಿ ಅದರ ಮೇಲೆ ಡಾಂಬರ್ ಹಾಕಲಾಗಿದೆ. ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಹಿಂದೆ ಡಾಂಬರ್ ಕಿತ್ತು ಬರುತ್ತಿದೆ, ಹಳ್ಳದ ನೀರು ಹರಿಯಲು ಐದು ಕಡೆ ಸಣ್ಣ ಸೇತುವೆಗಳಿದ್ದು ಅವುಗಳನ್ನು ತೆಗೆದು ಹೊಸದಾಗಿ ನಿರ್ಮಿಸಿಲ್ಲ, ಹೀಗಾಗಿ ಸರಾಗವಾಗಿ ನೀರು ಸಾಗಲು ತೊಂದರೆಯಾಗುತ್ತಿದೆ.