ಹರಿಹರ: ಡಿಜೆ ನಿಷೇಧದ ನಡುವೆಯು ಹರಿಹರದಲ್ಲಿ ಅದ್ದೂರಿ ಹಿಂದೂ ಮಹಾ ಗಣಪತಿ ವಿಸರ್ಜನಾ ಶೋಭಾಯಾತ್ರೆ
ಡಿಜೆ ನಿಷೇಧದ ನಡುವೆಯು ಭಾನುವಾರ ದಾವಣಗೆರೆ ಜಿಲ್ಲೆಯ ಹರಿಹರದ ಹಿಂದೂ ಮಹಾ ಗಣಪತಿ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಕಲಾತಂಡಗಳ ತಾಳಕ್ಕೆ ತಕ್ಕಂತೆ ಮೈರೆತು ಹೆಜ್ಜೆ ಹಾಕಿದ ಯುವಜನತೆ, ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತ ಭಕ್ತರ ದಂಡು, ಮೆರವಣಿಗೆ ಸೊಬಗನ್ನು ಕಣ್ ತುಂಬಿಕೊAಡರು. ಹಿಂದೂ ಮಹಾ ಗಣಪತಿಯ 6ನೇ ವರ್ಷದ ಗಣೇಶನ ವಿಸರ್ಜನಾ ಮೆರವಣಿಗೆಗೆ ಶಾಸಕ ಬಿ.ಪಿ.ಹರೀಶ್ ಟ್ರಾö್ಯಕ್ಟರ್ ಚಾಲನೆ ಮಾಡುವ ಮೂಲಕ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಯ ವಿಭಜಕ, ಕಟ್ಟಡ ಮೇಲೆ, ಎಲ್ಲಿ ನೋಡಿದರಲ್ಲಿ ಜನವೋ ಜನ. ಹರಿಹರ ತಾಲೂಕು ಸೇರಿದಂತೆ ಪಕ್ಕದ ದಾವಣಗೆರೆ, ಹೊನ್ನಾಳ್ಳಿ, ರಾಣೇಬೆನ್ನೂರು, ಹರಪನಹಳ್ಳಿ ಯಿಂದ ಜನರು ಗಣೇಶ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.