ಅಫಜಲ್ಪುರ: ಕಬ್ಬು ಬೆಳೆಗಾರರಿಂದ ಅಫಜಲಪುರ ಬಂದ್: ಬಂದ್ ಹೆಸರಲ್ಲಿ ಪಟ್ಟಣದಲ್ಲಿ ಬಡ ವ್ಯಾಪಾರಿಗಳ ತರಕಾರಿ ಚೆಲ್ಲಾಪಿಲ್ಲಿ ಮಾಡಿದ ಕಿಡಿಗೇಡಿಗಳು
ಕಲಬುರಗಿ : ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕೆಂದು ಆಗ್ರಹಿಸಿ ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣ ಬಂದ್ಗೆ ಕರೆ ನೀಡಲಾಗಿತ್ತು.. ಬಂದ್ ವೇಳೆ ಸಣ್ಣ ಸಣ್ಣ ಬಡ ವ್ಯಾಪಾರಿಗಳು ರಸ್ತೆ ಬದಿ ತರಕಾರಿ ಮಾರಾಟ ಮಾಡ್ತಿದ್ದ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೇಲ ಕಿಡಿಗೇಡಿಗಳು ತರಕಾರಿಗಳನ್ನ ಎಸೆದು ಅಸಭ್ಯವಾಗಿ ವರ್ತಿಸಿದ್ದಾರೆ.. ನ10 ರಂದು ಮಧ್ಯಾನ 3 ಗಂಟೆಗೆ ಈ ಘಟನೆ ನಡೆದಿದೆ.. ಬಂದ್ ಇದ್ರು ಸಹ ತರಕಾರಿ ಇತರೆ ವಸ್ತುಗಳು ಮಾರಾಟ ಮಾಡ್ತಿದ್ದ ಬಡವರ ಮೇಲೆ ಕೆಲ ಕಿಡಿಗೇಡಿಗಳು ದೌರ್ಜನ್ಯ ಎಸಗಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ