ರಾಯಚೂರು ನಗರದ ಹಳೆ ಆಶ್ರಯ ಕಾಲೋನಿ ವಾರ್ಡ ನಂ 28ರಲ್ಲಿ ಸುಮಾರು 1500 ಮನೆಗಳಲ್ಲಿ ಬಡ ನಿವಾಸಿಗಳಿದ್ದು, ಈ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳಾದ ವಿದ್ಯುತ್ ದೀಪ, ರಸ್ತೆ, ಒಳಚರಂಡಿ ಕಾಲುವೆ ನಿರ್ಮಾಣ ಕುಡಿಯುವ ನೀರಿನ ಕಾಮಗಾರಿ ನಡೆಯದೆ, ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದು ಸಮಸ್ಯೆಗಳನ್ನು ಈಡೇರಿಸಲು ಜಿಲ್ಲಾಧಿಕಾರಿಗಳಿಗೆ ನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಮನವಿ ಪತ್ರ ಸಲ್ಲಿಸಿದರು.