ಮಂಡ್ಯ: ಮೈಸೂರು ಸಂಸ್ಥಾನದಲ್ಲಿ ರೈತರಿಗೆ ಲೆಸ್ಲಿ ಕೋಲ್ಮನ್ ಕೊಡುಗೆ: ನಗರದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ
Mandya, Mandya | Sep 14, 2025 ಮೈಸೂರು ಸಂಸ್ಥಾನದ ಪ್ರಮುಖರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅನನ್ಯವಾದದ್ದು. ಅದೇ ರೀತಿ ರೈತರಿಗೆ ಲೆಸ್ಲಿ ಕೋಲ್ಮನ್ ಅವರ ಕೊಡುಗೆಯೂ ಅಪಾರವಾದದ್ದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಬಣ್ಣಿಸಿದರು. ಲೆಸ್ಲಿ ಕೋಲ್ಮನ್ ಅವರ ಸಂಸ್ಮರಣೆ ದಿನದ ಅಂಗವಾಗಿ ಮೈಷುಗರ್ ಆವರಣದಲ್ಲಿರುವ ಲೆಸ್ಲಿ ಕೋಲ್ಮನ್ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ಸಕ್ಕರೆ ಕಾರ್ಖಾನೆಗಳಲ್ಲೊಂದಾಗಿರುವ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿ, ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಬ್ಬನ್ನು ಈ ಪ್ರಾಂತ್ಯದಲ್ಲಿ ಬೆಳೆಯುವಂತೆ ಮಾಡಿದರು ಎಂದು ಹೇಳಿದರು.