ಸಂಡೂರು: ತಾಲೂಕಿನ ಡಿ.ಅಂತಾಪುರ ಗ್ರಾಮದಲ್ಲಿಕರಡಿ ದಾಳಿ: ಯುವಕ ಅಪಾಯದಿಂದ ಪಾರು
Sandur, Ballari | Sep 28, 2025 ತಾಲೂಕಿನ ಡಿ.ಅಂತಾಪುರ ಗ್ರಾಮದಲ್ಲಿ ಕರಡಿಯೊಂದು ಗ್ರಾಮದ ಅಬ್ದುಲ್ (19) ಎಂಬವರ ಮೇಲೆ ದಾಳಿ ಮಾಡಿ, ಗಾಯಗೊಳಿಸಿದ ಘಟನೆ ಶನಿವಾರ ಮಧ್ಯಾಹ್ನ 3ಗಂಟೆಗೆ ನಡೆದಿದೆ.ಕರಡಿ ದಾಳಿ ಮಾಡಿದ ಸಂದರ್ಭದಲ್ಲಿ ಯುವಕ ಕಿರುಚಾಡಿದ್ದಾನೆ. ಯುವಕನ ತೊಡೆಯ ಭಾಗದಲ್ಲಿ ತರಚಿದ ಗಾಯವಾಗಿದೆ. ಕಿರುಚಾಟದಿಂದ ಕರಡಿ ಓಡಿ ಹೋಗಿದೆ. ಯುವಕ ಅಪಾಯದಿಂದ ಪಾರಾಗಿದ್ದಾನೆ. ವಿಷಯ ತಿಳಿದು ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯುವಕ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.