ಗುಂಡ್ಲುಪೇಟೆ: ಬೆಳಚವಾಡಿಯಲ್ಲಿ ತಗ್ಗು ಪ್ರದೇಶದ ಮನೆಗಳ ಸುತ್ತಾ ನಿಂತ ಮಳೆ ನೀರು- ನಿವಾಸಿಗಳ ಪರದಾಟ
ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಗ್ರಾಮದ ತಗ್ಗು ಪ್ರದೇಶದಲ್ಲಿರುವ ಮನೆಗಳ ಸುತ್ತಾ ಮಳೆ ನೀರು ನಿಂತು ನಿವಾಸಿಗಳು ಪರದಾಡುವಂತಾಗಿದೆ. ಬೆಳಚಲವಾಡಿ ಗ್ರಾಮದ ತಗ್ಗು ಪ್ರದೇಶದಲ್ಲಿ ಸುಬ್ಬಣ್ಣ ಸೇರಿದಂತೆ ಹಲವು ಮಂದಿ ಮನೆಗಳಿದ್ದು, ಮಳೆ ಬಂದ ಸಂದರ್ಭದಲ್ಲಿ ಗೋಳು ತಪ್ಪಿದ್ದಲ್ಲ. ಜೊತೆಗೆ ಚರಂಡಿಯಲ್ಲಿ ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಹರಿದು ಹೋಗದೆ ನಿಂತಲ್ಲೆ ನಿಂತು ಮಳೆ ಬಂದ ಸಂದರ್ಭದಲ್ಲಿ ಖಾಲಿ ಜಾಗ ಮತ್ತು ತಗ್ಗು ಪ್ರದೇಶದಲ್ಲಿ ಕೆರೆ ಮಾದರಿಯಲ್ಲಿ ನೀರು ನಿಲ್ಲುತ್ತಿದೆ ಎಂದು ನಿವಾಸಿಗಳು ಕಿಡಿಕಾರಿದರು. ಕೂಡಲೇ ಗ್ರಾಪಂ ಅಧಿಕಾರಿಗಳು ಸಮಸ್ಯೆಗೆ ಮುಕ್ತಿ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.