ಚಾಮರಾಜನಗರ: ಕಲ್ಪುರದಲ್ಲಿ ಹುಲಿ ದಾಳಿಗೆ ಎರಡು ಹಸು ಬಲಿ- ರೈತರಿಗೆ ನಿಲ್ಲದ ಭೀತಿ
ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಕಲ್ಪುರ ಗ್ರಾಮದಲ್ಲಿ ಹುಲಿ ದಾಳಿಗೆ ಎರಡು ಹಸುಗಳು ಬಲಿಯಾದ ಘಟನೆ ಶನಿವಾರ ಸಂಜೆ ನಡೆದಿದೆ. ಕಲ್ಪುರ ಗ್ರಾಮದ ಕುಮಾರ್ ಎಂಬವರಿಗೆ ಸೇರಿದ ಹಸುಗಳು ಬಲಿಯಾಗಿವೆ. ರೈತ ಕುಮಾರ್ ತಮ್ಮ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ ಹುಲಿ ದಾಳಿ ನಡೆಸಿ ರಕ್ತಹೀರಿ ಬಲಿ ಪಡೆದಿದೆ. ಚಿರತೆ ಮತ್ತು ಹುಲಿ ಭೀತಿಯಿಂದ ಜಮೀನುಗಳಿಗೆ ತೆರಳಲು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಹುಲಿ ಸೆರೆ ಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.