ಮಸ್ಕಿ: ಕವಿತಾಳ ಪಟ್ಟಣದ ಕಲ್ಮಠದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ
Maski, Raichur | Mar 28, 2024 ಸಿರವಾರ : ಸಿದ್ದಲಿಂಗ ಸ್ವಾಮೀಜಿಗಳ 48ನೇ ಪುಣ್ಯ ಸ್ಮರಣೆ ಹಾಗೂ ನೂತನ ಪೀಠಾಧಿಪತಿ ಅಭಿನವ ಸಿದ್ದಲಿಂಗ ಸ್ವಾಮಿ ಜಿಗಳ ಪ್ರಥಮ ವರ್ಷದ ಪಟ್ಟಾಧಿಕಾರ ವರ್ಧಂತಿ ಮಹೋತ್ಸವದ ಪ್ರಯುಕ್ತ ಕವಿತಾಳ ಪಟ್ಟಣ ದ ಕಲ್ಮಠದಲ್ಲಿ ಹಮ್ಮಿಕೊಂಡ ದಾನಮ್ಮದೇವಿ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು. ಮಾನ್ವಿ ಕಲ್ಮಠದ ವಿರುಪಾಕ್ಷ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಲ್ಮಠ ಅಭಿನವ ಸಿದ್ದಲಿಂಗ ಸ್ವಾಮೀಜಿ ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಭಕ್ತರು ಸಹಕರಿಸಬೇಕು ಎಂದರು.