ರಾಯಚೂರು: ಜಿಲ್ಲೆಯಲ್ಲಿ ನಿರಂತರ ಮಳೆಗೆ ಕೊಚ್ಚಿ ಹೋದ ರಸ್ತೆ; ಹಂಚಿನಾಳ ಗ್ರಾಮದ ಸಂಪರ್ಕ ಕಡಿತ
ನಿರಂತರ ಮಳೆಯಿಂದಾಗಿ ರಾಯಚೂರು ಜಿಲ್ಲೆಯ ಲಿಂಗಸೂಗುರು ತಾಲ್ಲೂಕಿನ ಹಂಚಿನಾಳ ಗ್ರಾಮದ ಶೀಲಹಳ್ಳಿ ರಸ್ತೆ ಸೆ.25 ರ ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೆ.26 ಶುಕ್ರವಾರ ಬೆಳಗಿನ ಜಾವ ಮತ್ತೆ ಕೊಚ್ಚಿ ಹೋಗಿದೆ. ಇದರಿಂದ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಈ ಹಿಂದೆ ಸೆ.18 ರಂದು ಕೆರೆ ಹೊಡೆದು ರಸ್ತೆ ಕೊಚ್ಚಿ ಹೋಗಿತ್ತು, ಹಂಚಿನಾಳದ ಗ್ರಾಮಸ್ಥರೇ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿಸಿದ್ದರು. ಇದೀಗ ಮತ್ತೆ ನಿರಂತರ ಮಳೆಯ ಪರಿಣಾಮ ರಸ್ತೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ.