ಮೊಳಕಾಲ್ಮುರು:-ಪಟ್ಟಣದ ಅಂಬೇಡ್ಕರ್ ಕಾಲೋನಿಯ ಬಾವಿಯ ಸುತ್ತಲೂ ಕಟ್ಟಿರುವ ರಕ್ಷಣಾ ತಡೆ ಗೋಡೆ ಕುಸಿದು ಬೀಳುತ್ತಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಮಳೆಗಾಲದ ಸಮಯವಾದ್ದರಿಂದ ಬಾವಿಯ ಸುತ್ತಲೂ ಕಟ್ಟಲಾದ ಗೋಡೆ ಕುಸಿದು ಬೀಳುತ್ತಿದೆ.ಈ ಬಾವಿ ಪುರಾತನ ಕಾಲದಲ್ಲಿ ಪಾಳೇಗಾರರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನಲಾಗಿದ್ದು, ಸದ್ಯ ಇದರ ನಿರ್ವಹಣೆ ಕೆಲಸ ನಡೆಯಿತ್ತಿಲ್ಲ. ಬಾವಿಯ ಸುತ್ತಲಿನ ರಕ್ಷಣಾ ತಡೆಗೋಡೆ ದಿನೇ ದಿನೇ ಕುಸಿದು ಬಿಳಿತ್ತಿದ್ದು ಕಾಲೋನಿ ಅಕ್ಕ ಪಕ್ಕದ ನಿವಾಸಿಗಳು ಭಯಭೀತಾರಾಗಿದ್ದಾರೆ. ಸಮಸ್ಯೆ ಕುರಿತಾಗಿ ಸ್ಥಳೀಯ ನಿವಾಸಿಗಳು ಭಾನುವಾರ ಮಧ್ಯಾಹ್ನ 3ಗಂಟೆಗೆ ಪಬ್ಲಿಕ್ ಆಪ್ ಜತೆಗೆ ಮಾತನಾಡಿದ್ದಾರೆ.