ಚಿಟಗುಪ್ಪ: ಪಟ್ಟಣದಲ್ಲಿ ಪ್ರಾಥಮಿಕ ಗ್ರಾಹಕರ ಸಹಕಾರ ಸಂಘದ ಚುನಾವಣೆಯಲ್ಲಿ ರೇವಣಸಿದ್ದಪ್ಪ ಭೂತಾಳೆ ಭರ್ಜರಿ ಗೆಲುವು
ಪ್ರಾಥಮಿಕ ಗ್ರಾಹಕರ ಸಹಕಾರ ಸಂಘದ ಒಂದು ಸ್ಥಾನಕ್ಕಾಗಿ ಶನಿವಾರ ನಡೆದ ಚುನಾವಣೆಯಲ್ಲಿ ರೇವಣಸಿದ್ದಪ್ಪ ಭೂತಾಳೆ ಅವರು ಅತ್ಯಧಿಕ ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 200ಮತಗಳ ಪೈಕಿ 163ಮತ ಪಡೆದು ವಿಜಯ ಸಾಧಿಸಿದರೆ, ಎದುರಾಳಿ ವಿಠ್ಠಲರಾವ್ ಪಾಠಣಕರ್ ಅವರು ಕೇವಲ 36 ಮತ ಪಡೆದು ಪ್ರಭಾವಗೊಂಡರು. ಗೆಲುವಿನ ಬಳಿಕ ಶನಿವಾರ ಸಂಜೆ 5:30ಕ್ಕೆ ನಡೆದ ಸಂಭ್ರಮಾಚರಣೆ ಸಂದರ್ಭದಲ್ಲಿ ಅಮಿತ್ ತೊಗಲೂರ, ರಾಜಗೋಪಾಲ್, ಅನೀಲ್ ಜೋಶಿ, ಪ್ರವೀಣ್ ರಾಜಾಪುರ್, ಸಚಿನ್ ಮಠಪತಿ, ವಿಜಯ್ ಕುಮಾರ್ ಬೊಮ್ಮಣ್ಣಿ, ಗಣೇಶ್ ಐ ನಾಪುರ, ವೀರಣ್ಣ ಹೊಸಳ್ಳಿ ಹಾಜರಿದ್ದರು.