ಗುಂಡ್ಲುಪೇಟೆ: ಆಕ್ಷೇಪಾರ್ಹ ಪದ ಬಳಕೆ: ಗುಂಡ್ಲುಪೇಟೆಯಲ್ಲಿ ರಮೇಶ್ ಕತ್ತಿ ಪ್ರತಿಕೃತಿ ದಹಿಸಿ ಆಕ್ರೋಶ
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ಮಾಜಿ ಸಂಸದ ರಮೇಶ್ ಕತ್ತಿ ಬಳಸಿದ ಆಕ್ಷೇಪಾರ್ಹ ಪದ ಬಳಕೆ ಖಂಡಿಸಿ ನಾಯಕ ಸಮುದಾಯದವರು ಗುಂಡ್ಲುಪೇಟೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಕಾರ್ಯಕರ್ತರು ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಿಂದ ಸಾರಿಗೆ ಬಸ್ ನಿಲ್ದಾಣದ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ, ಮಾನವ ಸರಪಳಿ ನಿರ್ಮಿಸಿ ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಆಕ್ರೋಶ ಹೊರಹಾಕಿದರು. ರಮೇಶ್ ಕತ್ತಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಅಸಮಾಧಾನ ಹೊರಹಾಕಿದ ಪ್ರತಿಭಟನಾಕಾರರು, ರಮೇಶ್ ಕತ್ತಿ ಪ್ರತಿಕೃತಿ ದಹಿಸಿ ಕಿಡಿಕಾರಿದರು.