ಚಿಕ್ಕಬಳ್ಳಾಪುರ: ಜಮೀನು ವಿಚಾರಕ್ಕೆ ನಲ್ಲಿಮರದಹಳ್ಳಿಯಲ್ಲಿ ಮಚ್ಚು ಲಾಂಗ್‌ನಿಂದ ವ್ಯಕ್ತಿ ಮೇಲೆ ಹಲ್ಲೆ
ಜಮೀನು ವಿಚಾರ,ಮಚ್ಚು ಲಾಂಗ್ ಗಳಿಂದ ದಾಳಿ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಲ್ಲಿಮರದಹಳ್ಳಿಯಲ್ಲಿ ನಡೆದಿದೆ. ಶ್ರೀನಿವಾಸ್ ಎಂಬುವವರ ಮೇಲೆ 8 ಜನರಿಂದ ಮಚ್ಚಿನಿಂದ ಹಲ್ಲೆ ಮಾಡಿದ್ದು ಸದ್ಯ ಶ್ರೀನಿವಾಸ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.8 ಜನರಿಂದ ಒಂದೇ ಬಾರೀ ಅಟ್ಯಾಕ್ ಮಾಡಿರುವ ವೀಡಿಯೋ ಸ್ಥಳೀಯರು ರೆಕಾರ್ಡ್ ಮಾಡಿದ್ದಾರೆ. ಇನ್ನೂ ಶ್ರೀನಿವಾಸ್ ದಿಬ್ಬೂರು ಗ್ರಾಮದ ನಾರಾಯಣಪ್ಪ ಎಂಬುವವರಿಗೆ ಜಮೀನು ವಿಚಾರವಾಗಿ ಸಾಕ್ಷಿ ಸಹಿ ಹಾಕಿದ್ದು ಇದೇ ವಿಚಾರವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.