ಕಲಬುರಗಿ: ಆರ್‌ಎಸ್‌ಎಸ್‌ಗೆ ಪಥಸಂಚಲನಕ್ಕೆ ಅನುಮತಿ ನೀಡಬೇಡಿ: ನಗರದಲ್ಲಿ ಡಿಸಿಗೆ ಮನವಿ ಸಲ್ಲಿಸಿದ ಕರ್ನಾಟಕ ಸೌಹಾರ್ದ ಸಮಿತಿ
ಕಲಬುರಗಿ : ನವೆಂಬರ್ 2 ರಂದು ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ಪಥಸಂಚಲನ ನಡೆಸಲು ಆರ್‌ಎಸ್‌ಎಸ್ ಮನವಿ ಸಲ್ಲಿಸಿದ್ದು, ಯಾವುದೇ ಕಾರಣಕ್ಕೆ ಪಥಸಂಚಲನ ನಡೆಸಲು ಆರ್‌ಎಸ್‌ಎಸ್‌ಗೆ ಅನುಮತಿ ನೀಡಬಾರದೆಂದು ಕರ್ನಾಟಕ ಸೌಹಾರ್ದ ಸಮಿತಿ ವತಿಯಿಂದ ಅಕ್ಟೋಬರ್ 22 ರಂದು ಮಧ್ಯಾನ 12.30 ಕ್ಕೆ ಡಿಸಿಗೆ ಮನವಿ ಸಲ್ಲಿಸಿದೆ.. ಇನ್ನೂ ಆರ್‌ಎಸ್‌ಎಸ್ ಸಂಘಟನೆ ಉದ್ದೇಶಪೂರ್ವಕವಾಗಿ ಚಿತ್ತಾಪುರದಲ್ಲಿ ಕೋಮು ಸೌಹಾರ್ದ ಹಾಳು ಮಾಡಲು ಪಥಸಂಚಲನ ಮಾಡ್ತಿದ್ದು, ಆರ್‌ಎಸ್‌ಎಸ್‌ಗೆ ಅನುಮತಿ ನೀಡಬಾರದೆಂದು ಕರ್ನಾಟಕ ಸೌಹಾರ್ದ ಸಮಿತಿ ಮನವಿ ಮಾಡಿದೆ.