ಬೀದರ್: ಬೀದರ್, ಕಲ್ಬುರ್ಗಿ ಕರ್ನಾಟಕದಲ್ಲಿವೆ ಅನ್ನೋದು ಕೃಷಿ ಸಚಿವರಿಗೆ ಗೊತ್ತಿದೆಯೋ ಇಲ್ಲವೋ: ಮರ್ಕಲನಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ
Bidar, Bidar | Sep 16, 2025 ಬೀದರ್, ಕಲ್ಬುರ್ಗಿ ಕರ್ನಾಟಕ ರಾಜ್ಯದಲ್ಲಿವೆ ಅನ್ನೋದು ಕೃಷಿ ಸಚಿವರಿಗೆ ಗೊತ್ತಿದೆಯೋ ಇಲ್ವೋ ತಿಳಿತಾ ಇಲ್ಲ ಅಂತ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು. ಅತಿವೃಷ್ಟಿ ಹಾನಿ ಪರಿಶೀಲನೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮರ್ಕಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಾಪುರ್ ಇದ್ದರು.