ದಾವಣಗೆರೆ: ಕಾಂಗ್ರೆಸ್ ಗ್ಯಾರಂಟಿಗಳಿಂದ ರಾಜ್ಯವನ್ನು ಆಳುವುದಕ್ಕೆ ಸಾಧ್ಯವಿಲ್ಲ: ನಗರದಲ್ಲಿ ಜೆಡಿಎಸ್ ಮಾಜಿ ಶಾಸಕ ಶಿವಶಂಕರ್
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೆಲವು ಸಮುದಾಯವನ್ನು ಓಲೈಕೆ ಮಾಡುವಲ್ಲಿ ಕ್ರಿಯಾಶೀಲವಾಗಿದೆ. ಸ್ವಜನಪಕ್ಷಪಾತ ಮಿತಿ ಮೀರಿದ್ದು, ಅಭಿವೃದ್ಧಿ ಮರೆತು, ಭ್ರಷ್ಟಾಚಾರ ಜಾಸ್ತಿ ಆಗಿದೆ. ಇದನ್ನೆಲ್ಲ ಮನಗಂಡು ದೇಶದ ಹಿತ, ರಾಜ್ಯದ ಅಭಿವೃದ್ಧಿಗಾಗಿ ನಾವೆಲ್ಲ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದು ಜೆಡಿಎಸ್ ಮಾಜಿ ಶಾಸಕ ಶಿವಶಂಕರ್ ಹೇಳಿದರು. ಈಗಾಗಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದ್ದು, ಎರಡು ಬಜೆಟ್ ಮಾಡಿದ್ದಾರೆ. ಎರಡು ಬಜೆಟ್‌ನಲ್ಲಿ ಕೂಡ ನಮ್ಮ ದಾವಣಗೆರೆ ಅಭಿವೃದ್ಧಿಗೆ ಯಾವುದೇ ಹಣವನ್ನು ನೀಡಿಲ್ಲ ಎಂದರು.