ಬೆಂಗಳೂರು ಉತ್ತರ: ಅಗ್ನಿ ಅವಘಡ, ಬೈಕ್ ಶೋಂ ಸುತ್ತು ಕರಕಲು, 5 ಕೋಟಿ ನಷ್ಟ
ರಾತ್ರಿ 9:30ರ ಸುಮಾರಿಗೆ ಟಿ.ಸಿ.ಪಾಳ್ಯ ಸಿಗ್ನಲ್ ಬಳಿಯ ಪ್ರವೀಣ್ ಮೋಟಾರ್ಸ್ ಎಂಬ ಬಜಾಜ್ ಶೋರೂಂನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ನೂರಕ್ಕೂ ಹೆಚ್ಚು ಹೊಸ ಬೈಕ್ಗಳು ಮತ್ತು 150-200 ಸರ್ವಿಸ್ಗೆ ಬಂದಿದ್ದ ಬೈಕ್ಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಿಂದ ಸುಮಾರು 5 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.