ಹುಲಸೂರ: ಗಡಿರಾಯಪಳ್ಳಿ ಗ್ರಾಮಕ್ಕೆ ಡಿಸಿ, ಎಸ್ಪಿ ಭೇಟಿ; ಶಾಂತಿ ಕಾಪಾಡಲು ಸಲಹೆ
Hulsoor, Bidar | Oct 13, 2025 ಗಡಿರಾಯಪಳ್ಳಿ : ನೀಲಿ ಧ್ವಜಕ್ಕೆ ಕಿಡಿಗೇಡಿಗಳಿಂದ ಬೆಂಕಿ ಪ್ರಕರಣ || ಗ್ರಾಮದಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶಾಂತಿ ಸಭೆ . ಹುಲಸೂರ: ತಾಲ್ಲೂಕಿನ ಗಡಿರಾಯಪಳ್ಳಿ ಗ್ರಾಮದಲ್ಲಿ ಈಚೆಗೆ ಗ್ರಾಮದ ಅಂಬೇಡ್ಕರ ಭಾವಚಿತ್ರ ಬಳಿ ಇರುವ ನೀಲಿ ಧ್ವಜಕ್ಕೆ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿ ಧ್ವಜ ಸುಟ್ಟ ಘಟನೆ ನಡೆದಿದ್ದು, ಗ್ರಾಮದಲ್ಲಿ ವಾತಾವರಣ ಉದ್ವಿಗ್ನಗೊಂಡಿರುವ ಹಿನ್ನಲೆ ಗಡಿರಾಯಪಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಸೋಮವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮಸ್ಥರನ್ನು ಒಂದೆಡೆ ಸೇರಿಸಿ ಶಾಂತಿ ಸಭೆ ನಡೆಸಿದರು. ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾ