ಕಲಬುರಗಿ: ಚಿತ್ತಾಪುರದಲ್ಲಿ ಭಗವಾ ಧ್ವಜ/ಬ್ಯಾನರ್ ತೆರವು: ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಂಸದ ಡಾ ಉಮೇಶ್ ಜಾಧವ್ ಕಿಡಿ
ಕಲಬುರಗಿ : ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ನಾಳೆ ಆರ್ಎಸ್ಎಸ್ ಪಥಸಂಚಲನ ಅಂಗವಾಗಿ ಹಾಕಲಾಗಿದ್ದ ಭಗವಾ ಧ್ವಜ ಹಾಗೂ ಸ್ವಾಗತ ಬ್ಯಾನರಗಳನ್ನ ತೆರವು ಮಾಡಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಂಸದ ಡಾ ಉಮೇಶ್ ಜಾಧವ್ ಕಿಡಿಕಾರಿದ್ದಾರೆ.. ಅ18 ರಂದು ಮಧ್ಯಾನ 3 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರ ಆದೇಶ ಆಜ್ಞೆ ಇಲ್ಲದೇ ಒಂದು ಕಡ್ಡಿ ಸಹ ಅಲುಗಾಡಲ್ಲ ಅಂತಾ ಜಾಧವ್ ಆಕ್ರೋಶ ವ್ಯಕ್ತಪಡಿಸಿದರು..