ಕಲಬುರಗಿ: ರಾಶಿಗಟ್ಟಲೇ ಸ್ಯಾನಿಟರಿ ಪ್ಯಾಡ್ ಸುಟ್ಟುಹಾಕಿದ ಫರಹತ್ತಬಾದ್ ವೈದ್ಯರ ವಿರುದ್ಧ ಕ್ರಮಕ್ಕೆ ನಗರದಲ್ಲಿ ಹೋರಾಟಗಾರ ಮಲ್ಲಿಕಾರ್ಜುನ ಸಾರವಾಡ ಆಗ್ರಹ
ಕಲಬುರಗಿ : ಕಲಬುರಗಿ ತಾಲೂಕಿನ ಫರಹತ್ತಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯುವತಿಯರಿಗೆ, ಮಹಿಳೆಯರಿಗೆ ಉಚಿತವಾಗಿ ವಿತರಿಸಬೇಕಿದ್ದ ರಾಶಿಗಟ್ಟಲೇ ಸ್ಯಾನಿಟರಿ ಪ್ಯಾಡ್ ಸುಟ್ಟು ಹಾಕಿದ ಘಟನೆಗೆ ಸಂಬಂಧಿಸಿದಂತೆ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಜೈ ಕರ್ನಾಟಕ ಸಂಘಟನೆ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ್ ಆಗ್ರಹಿಸಿದ್ದಾರೆ.. ಸೆ14 ರಂದು ಮಧ್ಯಾನ 12.30 ಕ್ಕೆ ನಗರದಲ್ಲಿ ಮಾತನಾಡಿದ ಅವರು, ವೈದ್ಯರ ನಿರ್ಲಕ್ಷ್ಯದ ಬಗ್ಗೆ ವರದಿ ಸಲ್ಲಿಕೆಯಾದರೂ ಕ್ರಮ ತೆಗೆದುಕೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು .