ಹಳಿಯಾಳ: ಕರ್ಮವೀರ ವಿಶೇಷಾಂಕ ಪುಸ್ತಕವನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದ ಶಾಸಕ ಆರ್.ವಿ.ದೇಶಪಾಂಡೆ
ಹಳಿಯಾಳ : ದೀಪಾವಳಿ ಹಬ್ಬದ ಪ್ರಯುಕ್ತ ಲೋಕಶಿಕ್ಷಣ ಟ್ರಸ್ಟ್ ವತಿಯಿಂದ ಪ್ರಕಟಿಸಲಾದ ಕರ್ಮವೀರ ವಿಶೇಷಾಂಕ ಪುಸ್ತಕವನ್ನು ಹಳಿಯಾಳ - ಜೋಯಿಡಾ ವಿಧಾನ ಸಭಾ ಕ್ಷೃತ್ರದ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಸೋಮವಾರ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿರುವ ಲೋಕ ಶಿಕ್ಷಣ ಟ್ರಸ್ಟಿನ ಕಾರ್ಯಾಲಯದಲ್ಲಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ನ ಅಧ್ಯಕ್ಷ ಅಶೋಕ ಹಾರನಳ್ಳಿ,ಧರ್ಮದರ್ಶಿ ಯು.ಬಿ. ವೆಂಕಟೇಶ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಆಸಗೋಡು ಜಯಸಿಂಹ,ಪತ್ರಿಕೆಯ ಸಂಪಾದಕರು,ಹಿರಿಯ ಪತ್ರಕರ್ತರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.