ರಬಕವಿ-ಬನಹಟ್ಟಿ: ಮಹಲಿಂಗಪುರದಲ್ಲಿ ಮನೆ ಕುಸಿದು ಬಾಲಕ ಸಾವು ಪ್ರಕರಣ,ಮೃತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡಲು ಸೂಚಿಸಿದ ಸಚಿವ ತಿಮ್ಮಾಪೂರ್
ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಮಹಲಿಂಗಪುರದಲ್ಲಿ ಮನೆ ಕುಸಿದು ಬಾಲಕ ಸಾವನ್ನಪ್ಪಿರುವ ಪ್ರಕರಣಕ್ಕೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಕೂಡಲೇ 5 ಲಕ್ಷ ರುಪಾಯಿಯ ಪರಿಹಾರ ನೀಡುವಂತೆ ತಹಸೀಲ್ದಾರರಿಗೆ ಸೂಚನೆ ನೀಡಿರುತ್ತಾರೆ.ಇನ್ನು ಸ್ಥಳೀಯ ಆಡಳಿತವಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಗಾಯಗೊಂಡ ಮಗುವಿನ ಚಿಕಿತ್ಸೆಗೆ ಕ್ರಮ ಕೈಗೊಂಡಿದ್ದಾರೆ. ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ್ ಪಟ್ಟಣದಲ್ಲಿ ನಿರಂತರ ಮಳೆಯಿಂದಾಗಿ ಒಂದು ಮನೆಯ ಛಾವಣಿ ಬಿದ್ದು ಓರ್ವ ಬಾಲಕ ದರ್ಶನ ನಾಗಪ್ಪ ಲಾತೂರ (ವಯಸ್ಸು 13) ಸಾವನಪ್ಪಿರುತ್ತಾನೆ.