ನಗರದಲ್ಲಿ ಆರ್ ಎಸ್ ಮಾಜದ ವತಿಯಿಂದ ಮಹರ್ಷಿ ದಯಾನಂದ ಸರಸ್ವತಿ ಅವರ 150ನೇ ವರ್ಷಾಚರಣೆ ಮತ್ತು ಭಾಯಿ ಶಾಮ್ಲಾಲ್ ಬಲಿದಾನ ದಿನದ 87ನೇ ವರ್ಷಾಚರಣೆ ಕಾರ್ಯಕ್ರಮದ ಅಂಗವಾಗಿ ಬುಧವಾರ ಮಧ್ಯಾಹ್ನ 12ಕ್ಕೆ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಆರ್ಯ ಸಮಾಜದ ಜಿಲ್ಲೆಯ ಮಾತ್ರಬಲ್ಲದೆ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳ ಸಾವಿರಾರು ಸಂಖ್ಯೆಯ ಆರ್ಯ ಸಮಾಜದ ಅನುಯಾಯಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.