ಚನ್ನಪಟ್ಟಣ: ಮುಸ್ಲಿಂ ಧರ್ಮಗುರುಗಳ ಮೂಲಕ ಜಾತಿಗಣತಿ ಅರಿವು, ತಾಲ್ಲೂಕು ಆಡಳಿತ ದಿಂದ ಸಭೆ . ತಾಲ್ಲೂಕಿನ 672 ಬ್ಲಾಕ್ ಗಳಲ್ಲಿ ಸಮೀಕ್ಷೆ.
ಚನ್ನಪಟ್ಟಣ --ರಾಜ್ಯದಲ್ಲಿ ಜಾತಿಗಣತಿ ಪ್ರಾರಂಭವಾಗಿದ್ದು ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದ ನಗರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಇದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತಾಲ್ಲೂಕು ಆಡಳಿತ ಹಾಗೂ ನಗರಸಭೆ ಜಂಟಿಯಾಗಿ ಸೋಮವಾರ ರಾತ್ರಿ ಮುಸ್ಲಿಂ ಧರ್ಮಗುರುಗಳ ಸಮ್ಮುಖದಲ್ಲಿ ನಗರದ ಖಾಸಗಿ ಶಾಲಾ ಆವರಣದಲ್ಲಿ ಸಾರ್ವಜನಿಕ ಸಭೆ ಆಯೋಜನೆ ಮಾಡಿತ್ತು. ಚನ್ನಪಟ್ಟಣ ನಗರಸಭೆ ಅಧ್ಯಕ್ಷ ವಾಸಿಲ್ ಅಲಿ ಖಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹತ್ತಕ್ಕೂ ಹೆಚ್ಚು ಜನ ಧರ್ಮಗುರುಗಳು ಭಾಗವಹಿಸಿ ಎಲ್ಲರೂ ಸಹ ಸರ್ಕಾರದ ಸಮಾಜಿಕ, ಅರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸಹಕಾರ ಕೊಡಬೇ