ರಾಯಚೂರು: ನಗರದಲ್ಲಿ ಸಿಎಂ ವೈಮಾನಿಕ ಸಮೀಕ್ಷೆಯನ್ನ ಅಣಕಿಸಿದ ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ
ಬೀದಿಯಲ್ಲಿ ಬಂದರೆ ಜನ ಸಿಗುತ್ತಾರೆ, ಅಚರ ಕಷ್ಟ ತಿಳಿಯುತ್ತೆ. ಆದರೆ ಆಕಾಶದಲ್ಲಿ ಬಂದರೆ ಯಾರು ಸಿಗ್ತಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಲಬುರಗಿಯಲ್ಲಿ ನಡೆಸಿದ ವೈಮಾನಿಕ ಸಮೀಕ್ಷೆಯನ್ನ ಅಣಕಿಸಿದ್ದಾರೆ. ರಾಯಚೂರು ನಗರದಲ್ಲಿ ಅ.1 ರ ಬುಧವಾರ ಬೆಳಗ್ಗೆ 10 ಗಂಟೆಗೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆರೆಹಾವಳಿ ಬಂದಿದೆ. ಅಪಾರ ನಷ್ಟವಾಗಿದೆ. ನಾವು ಮೊದಲು ಪ್ರವಾಸ ಕೈಗೊಂಡು ಜನರ ಸಮಸ್ಯೆ ಕೇಳಿದ ನಂತರ ಸಿಎಂ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ವೈಮಾನಿಕ ಸಮೀಕ್ಷೆಯೇ ಲೇಸು ಯಾಕೆಂದರೆ ರಸ್ತೆಯಲ್ಲಿ ಬರಲು ಆ ಭಾಗದಲ್ಲಿ ರಸ್ತೆಗಳೇ ಸರಿ ಇಲ್ಲ. ರಸ್ತೆಗಳಲ್ಲಿ ಗುಂಡಿಗಳಿಲ್ಲ, ಬದಲಿಗೆ ಗುಂಡಿಗಳಲ್ಲಿ ರಸ್ತೆಗಳಿವೆ ಎಂದು ಲೇವಡಿ ಮಾಡಿದರು. ಕೂಡಲೇ ಕಲ್ಯಾಣ ಕರ್ನಾಟಕ ಭಾ