ವಿವೇಕ ನಗರ ಪೊಲೀಸರು ಬುಧವಾರ ಭರ್ಜರಿ ಕಾರ್ಯಾಚರಣೆ ನಡೆಸಿ, ಒಡಿಸ್ಸಾದಿಂದ ಗಾಂಜಾ ತಂದು ರಸ್ತೆ ಬದಿ ಮಾರುತ್ತಿದ್ದ ಸಂಜಿತ್ ಬಾಗ್ ಮತ್ತು ಮಿಥುನ್ ಕುಂಭಾರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಾಟ್ಸ್ ಆ್ಯಪ್ ಮೂಲಕ ಡ್ರಗ್ ಡೀಲಿಂಗ್ ಮಾಡುತ್ತಿದ್ದ ಇವರನ್ನು, ರಾಜಸ್ಥಾನದ ಪ್ರಮುಖ ಆರೋಪಿ ರಾಕೇಶ್ ನಿರ್ದೇಶಿಸುತ್ತಿದ್ದ. ಬಂಧಿತರಿಂದ 21 ಕೆಜಿ ಗಾಂಜಾ, ಸುಮಾರು 21 ಕೋಟಿ ರೂಪಾಯಿ ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿದೆ. ರಾಕೇಶ್ ಮತ್ತು ಸುಕ್ರ ವರ್ಮಾ ಎಂಬ ಪ್ರಮುಖ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.