ಶಿವಮೊಗ್ಗ: ನಗರದಲ್ಲಿ ನಮ್ಮೂರ ಸ್ವಚ್ಛತೆ ನಮ್ಮ ಜವಾಬ್ದಾರಿ ಕಾರ್ಯಕ್ರಮಕ್ಕೆ ಕೆ ಎಸ್.ಈಶ್ವರಪ್ಪ ಚಾಲನೆ
ಶಿವಮೊಗ್ಗ ನಗರದಲ್ಲಿ ನಮ್ಮೂರ ಸ್ವಚ್ಛತೆ ನಮ್ಮ ಜವಾಬ್ದಾರಿ ಕಾರ್ಯಕ್ರಮಕ್ಕೆ ಭಾನುವಾರ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದ್ದಾರೆ. ಪರೋಪಕಾರಂ ಹಾಗೂ ಮಾರವಾಡಿ ಯುವ ಮಂಚ್ ವತಿಯಿಂದ ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ ಸ್ವಚ್ಛತೆಯ ಅರಿವು ಹಾಗೂ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ನಗರದ ಪ್ರಮುಖ ಬಡಾವಣೆಗಳಲ್ಲಿ ಜಾಥ ಮೂಲಕ ಸ್ವಚ್ಛತೆಯ ಅರಿವನ್ನ ಮೂಡಿಸಿದರು.