ರಾಯಚೂರು: ರಾಯಚೂರು : ದಳದ ವಿರುದ್ಧ ನಿಮ್ಮ ಹೋರಾಟ ಮಾಡಬೇಕು ಕಾಂಗ್ರೆಸ್ ಮೇಲಲ್ಲ
ದಳದ ವಿರುದ್ಧ ನಿಮ್ಮ ಹೋರಾಟ ಮಾಡಬೇಕು ಕಾಂಗ್ರೆಸ್ ಮೇಲಲ್ಲ ಎಂದು ಗಾಣದಾಳ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪದಗ್ರಹಣ ಸಭೆಯಲ್ಲಿ ಡಿ ಕೆ ಶಿವಕುಮಾರ್ ಗಾಣದಾಳದಲ್ಲಿ ಹೇಳಿದರು. ರಾಯಚೂರು ತಾಲ್ಲೂಕಿನ ಗ್ರಾಣದಾಳ ಗ್ರಾಮದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ವ್ಯಕ್ತಿ ಪೂಜೆ ಮಾಡಬಾರದು ಪಕ್ಷ ಪೂಜೆ ಮಾಡಬೇಕು ಗುಂಪು ರಾಜಕಾರಣ ಮಾಡಲು ನಾನು ಅವಕಾಶ ಕೊಟ್ಟಿಲ್ಲ ಬೋಸರಾಜು 45 ವರ್ಷ ಸೇವೆ ಮಾಡಿದ್ದಾರೆ, ದುಡಿದಿದ್ದಾರೆ ಅಂತ ಅವರನ್ನ ಮಂತ್ರಿ ಮಾಡಿದ್ದಾರೆ. ಯಾರು ನಿಸ್ವಾರ್ಥದಿಂದ ದುಡಿತಾರೆ ಸೇವೆಮಾಡ್ತಾರೆ ಅವರಿಗೆ ಸ್ಥಾನ ಮಾನ ದೊರೆಯುತ್ತೆ. ನೂತನ ಪದಾಧಿಕಾರಿಗಳು ಸಹ ಪಕ್ಷಕ್ಕಾಗಿ ದುಡಿಯಬೇಕು ಎಂದರು.