ಕಲಬುರಗಿ: ಮನಿ ಡಬ್ಬಿಂಗ್ ಹೆಸರಲ್ಲಿ ₹31.64 ಲಕ್ಷ ಕಳೆದುಕೊಂಡ ನಗರದ ನಿವಾಸಿ
ಕಲಬುರಗಿ : ಹಣ ಡಬಲ್ ಮಾಡಿಕೊಡೋದಾಗಿ ವಂಚಕರು ಕಲಬುರಗಿ ನಗರದ ವ್ಯಕ್ತಿಯೊಬ್ಬರಿಗೆ ಬರೊಬ್ಬರಿ ₹31.64 ಲಕ್ಷ ರೂ ವಂಚಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದ್ದು, ನ7 ರಂದು ಸಂಜೆ 6 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ನಗರದ ಶಿವಾಜಿ ನಗರ ಬಡಾವಣೆ ನಿವಾಸಿಯಾದ ಮೆಡಿಕಲ್ ಶಾಪ್ ಮಾಲೀಕ ಶರಣಬಸಪ್ಪ ಮೈದರಗಿ ಎಂಬುಬರಿಗೆ ವಂಚಕರ ತಂಡ 'Nuvama-28 Portfolio Optimization' ಎಂವ ವಾಟ್ಸಪ್ ಗ್ರೂಪ್ನಲ್ಲಿ ಸೇರಿಸಿಕೊಂಡು, ಮನಿ ಡಬ್ಲಿಂಗ್ ಆಸೆ ತೋರಿಸಿದ್ದಾರೆ. ಅದರಂತೆ ಶರಣಬಸಪ್ಪ ವಂಚಕರ ಮಾತು ನಂಬಿ ಅವರ ಖಾತೆಗೆ ₹31.64 ಲಕ್ಷ ರೂ ಹಾಕಿದ್ದು, ಸದ್ಯ ಶರಣಬಸಪ್ಪ ವಂಚನೆಗೊಳಗಾಗಿದ್ದಾರೆ.. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.