ಬೆಂಗಳೂರು ಉತ್ತರ: ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತರು, ಜಂಟಿ ಆಯುಕ್ತರಿಂದ ಸ್ಥಳ ಪರಿಶೀಲನೆ
ಸೆಪ್ಟೆಂಬರ್ 15ರಂದು ಬೆಳಿಗ್ಗೆ 8 ಗಂಟೆಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಜಂಟಿ ಆಯುಕ್ತರು ಯಲಹಂಕ ವ್ಯಾಪ್ತಿಯ ಡಿ ಮಾರ್ಟ್ ಬಳಿ ಘನತ್ಯಾಜ್ಯ ನಿರ್ವಹಣೆ, ರಸ್ತೆ ಗುಂಡಿಗಳ ಪರಿಶೀಲನೆ, ಬೀದಿ ನಾಯಿಗಳ ಸಮಸ್ಯೆ ಕುರಿತು ಪರಿಶೀಲನೆ ನಡೆಸಿದರು.ಕಳೆದ ವಾರದ ತಪಾಸಣಾ ಸಮಯದಲ್ಲಿ ಸೂಚಿಸಲಾದಂತೆ ಕ್ರಮವಹಿಸಿರುವುದನ್ನು ಹಾಗೂ ಕಾರ್ಯ ವೈಖರಿ ಚುರುಕುಗೊಂಡಿರುವುದನ್ನು ಆಯುಕ್ತರು ಗಮನಿಸಿ, ತದನಂತರ ಕೆಂಪೇಗೌಡ ಉದ್ಯಾನವನ ಪರಿಶೀಲನೆ ಮಾಡಿದರು.ತ್ಯಾಜ್ಯವನ್ನ ತಮ್ಮ ಮನೆಯಿಂದಲೇ ಸರಿಯಾದ ರೀತಿಯಲ್ಲಿ ವಿಂಗಡಿಸಿ ನೀಡುವ ಮೂಲಕ ನಗರವನ್ನು ಸ್ವಚ್ಛವಾಗಿಡಲು ಸಹಕರಿಸಬೇಕಾಗಿ ಸಾರ್ವಜನಿಕರಿಗೆ ಇದೇ ವೇಳೆ ಅವರು ಮನವಿ ಮಾಡಿದರು.