ಚಾಮರಾಜನಗರ: ನಗರದಲ್ಲಿ ದಲಿತ ಸಂಘಟನೆಗಳ ಸಭೆ; ಎಸ್ಸಿ,ಎಸ್ಟಿ ಸಭೆ ಕರೆಯದಿದ್ದರೆ ಹೋರಾಟ ನಡೆಸಲು ತೀರ್ಮಾನ
ಜಿಲ್ಲಾಡಳಿತವು ಶೀಘ್ರದಲ್ಲೇ ಜಿಲ್ಲಾ ಮಟ್ಟದ ಎಸ್ಸಿ ,ಎಸ್ಟಿ ಹಿತರಕ್ಷಣಾ ಸಮಿತಿಯ ಸಭೆ ಕರೆಯದಿದ್ದರೆ ಪ್ರತಿಭಟನೆ ನಡೆಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿವಿಧ ದಲಿತ ಸಂಘಟನೆಗಳು ಮಂಗಳವಾರ ನಡೆಸಿದ ಸಭೆಯಲ್ಲಿ ಸಂಘಟನೆಗಳ ಮುಖಂಡರು ಚರ್ಚಿಸಿ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಂಡರು. ಸಿ.ಎಂ.ಶಿವಣ್ಣ ಮಾತನಾಡಿ, ನಮ್ಮ ಸಂಘಟನೆ ವತಿಯಿಂದ ಜಿಲ್ಲಾ ಮಟ್ಟದ ಎಸ್ ಸಿ, ಎಸ್ ಟಿ ಹಿತರಕ್ಷಣಾ ಸಮಿತಿ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲೆಯಲ್ಲಿ ದಲಿತ ಸಮಸ್ಯೆಗಳು ಬಹಳಷ್ಟು ಇದೆ. ದೌರ್ಜನ್ಯ ಪ್ರಕರಣಗಳಿಗೆ ನ್ಯಾಯ ದೊರೆತಿಲ್ಲ ಎಂದರು.