ಲಿಂಗಸೂರು: ಐದನಾಳ ದೊಡ್ಡಿ ಗ್ರಾಮದ ಮಕ್ಕಳು ಜೀವ ಭಯದಲ್ಲಿ ಹಳ್ಳದಲ್ಲಿ ಹೋಗಿ ಬರುತ್ತಿದ್ದು ಸೇತುವೆಗೆ ಸಾರ್ವಜನಿಕರ ಒತ್ತಾಯ
ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಗುಂತಗೊಳ ಗ್ರಾಮದ ಐದನಾಳರ ದೊಡ್ಡಿಯ ಶಾಲಾ ಮಕ್ಕಳು ಜೀವ ಭಯದಲ್ಲಿಯೇ ಅಪಾಯಕಾರಿ ಹಳ್ಳವನ್ನು ದಾಟಿಕೊಂಡು ಹೋಗಿ ಬರುವ ದುಸ್ಥಿತಿ ಎದುರಾಗಿದೆ. ಬುದುವಾರ ಬೆಳಗ್ಗೆ ಇಂತಹ ದೃಶ್ಯ ಕಂಡು ಬಂದಿದ್ದು, ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುವ ಭಯದಲ್ಲಿ ಮಕ್ಕಳು ಪರಸ್ಪರ ಒಬ್ಬರಿಗೊಬ್ಬರು ಕೈ ಹಿಡಿದು ಹಳ್ಳವನ್ನು ದಾಟಿರುವ ದೃಶ್ಯವೂ ಕೂಡ ಕಂಡುಬಂದಿದೆ. ಹಳ್ಳಕ್ಕೆ ಸೇತುವೆಯನ್ನು ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.