ಮೊಳಕಾಲ್ಮುರು: ಅಪರಿಚಿತ ವಾಹನ ಡಿಕ್ಕಿ, ಕರಡಿ ಸಾವು: ಹಾನಗಲ್ ಬಳಿ ಘಟನೆ
ಹಾನಗಲ್ ಸಮೀಪ ಅಪರಿಚಿತ ವಾಹನ ಡಿಕ್ಕಿಯಾಗಿ ರಸ್ತೆಯಲ್ಲೇ ಕರಡಿ ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಿಗ್ಗೆ 7 ಗಂಟೆಗೆ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಹಾನಗಲ್ ಬಳಿ ಜರುಗಿದೆ. ಡಿಕ್ಕಿ ಬಳಿ ವಾಹನ ಸಮೇತ ಸ್ಥಳದಿಂದ ಚಾಲಕ ಕಾಲ್ಕಿತ್ತಿದ್ದಾನೆ.ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ಘಟನೆ ಸಂಬವಿಸಿದೆ. ಸುಮಾರು ನಾಲ್ಕು ವರ್ಷದ ಕರಡಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೊಳಕಾಲ್ಮೂರು ಠಾಣೆಯಲ್ಲೆ ಕೇಸ್ ದಾಖಲಾಗಿದೆ