ಜಗಳೂರು: ಕೇಂದ್ರದಿಂದ ಕಾರ್ಮಿಕರ ಹಕ್ಕುಗಳನ್ನು ಕಸಿಯುವ ಹುನ್ನಾರ: ಪಟ್ಟಣದಲ್ಲಿ ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು
ದೇಶದಲ್ಲಿ ಕೇಂದ್ರ ಸರ್ಕಾರದ ಬಂಡವಾಳಶಾಹಿತ್ವದ ಪರ ಆಡಳಿತದಿಂದ ಕಾರ್ಮಿಕರ ಹಕ್ಕುಗಳ ಕಸಿಯುವ ಹುನ್ನಾರ ನಡೆಯುತ್ತಿದ್ದು ಸಂಘಟಿತ ಹೊರಾಟ ಅನಿವಾರ್ಯ ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು ಕರೆ ನೀಡಿದರು. ಭಾನುವಾರ ಸಂಜೆ 5 ಗಂಟೆಗೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಐಟಿಯುಸಿ ಹಾಗೂ ಸಿಪಿಐ ಪಕ್ಷದ ತಾಲ್ಲೂಕು ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.