ನಾಗಮಂಗಲ: ಫೇಸ್ಟುಕ್ ನಲ್ಲಿ ದೆವ್ವದ ವದಂತಿ ಹಬ್ಬಿಸಿದ ಯುವಕನಿಗೆ ಪಟ್ಟಣದ ಪೊಲೀಸರು ವಾರ್ನಿಂಗ್
ಫೇಸ್ಟುಕ್ ನಲ್ಲಿ ದೆವ್ವದ ವದಂತಿ ಹಬ್ಬಿಸಿದವನಿಗೆ ನಾಗಮಂಗಲದ ಯುವಕನಿಗೆ ಪೊಲೀಸರು ವಾರ್ನಿಂಗ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್ ಗಾಗಿ ಫೇಕ್ ದೆವ್ವದ ವಿಡಿಯೋ ಹಂಚಿಕೊಂಡಿದ್ದ ಯುವಕನಿಗೆ ಮಂಡ್ಯದ ಪೊಲೀಸರು ಬುದ್ದಿ ಹೇಳಿದ್ದಾರೆ. ನಾಗಮಂಗಲದಲ್ಲಿ ಬೈಕ್ ಸವಾರನಿಗೆ ದೆವ್ವ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿತ್ತು, ಇದರಿಂದ ಜನರು ಆ ರಸ್ತೆಯಲ್ಲಿ ಓಡಾಡಲು ಹೆದರುತ್ತಿದ್ದರು. ಇದನ್ನ ಮನಗಂಡ ಪೊಲೀಸರು ಫ್ಯಾಕ್ಟ್ಚೆಕ್ ನಡೆಸಿ ಫೋಟೋ ಮತ್ತು ವಿಡಿಯೋ ನಕಲಿ ಎಂದು ಪತ್ತೆ ಗೊಳಿಸಿದ್ದಾರೆ. ನಂತರ ವಿಡಿಯೋ ಅಪ್ಲೋಡ್ ಮಾಡಿದ್ದ ಯುವಕ ಗೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು, ಆತನಿಗೆ ಬುದ್ಧಿ ಹೇಳಿ ತಪ್ರೊಪ್ಪಿಗೆ ವಿಡಿಯೋ ಪೋಸ್ಟಸ್ಟ್ ಮಾಡಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.