ಹನೂರು: ಕೆ. ಗುಂಡಾಪುರದಲ್ಲಿ ಚಿರತೆಯ ದಾಳಿ – ಮೇಕೆ ಬಲಿ, ಆತಂಕದಲ್ಲಿಗ್ರಾಮಸ್ಥರು"
ಹನೂರು: ತಾಲೂಕಿನ ಕೆ. ಗುಂಡಾಪುರ ಗ್ರಾಮದಲ್ಲಿ ಚಿರತೆಯೊಂದು ಜಮೀನಿಗೆ ಲಗ್ಗೆ ಇಟ್ಟು, ಮೇಯುತ್ತಿದ್ದ ಮೇಕೆಯೊಂದನ್ನು ಬಲಿ ತೆಗೆದುಕೊಂಡ ಘಟನೆ ನೆಡೆದಿದೆ ಗ್ರಾಮದ ಭಾಸ್ಕರ್ ಎಂಬುವವರ ಜಮೀನಿನಲ್ಲಿ ಈ ಘಟನೆ ಸಂಭವಿಸಿದ್ದು, ಅರಣ್ಯದಿಂದ ಹೊರಬಂದ ಚಿರತೆಯೊಂದು ಜಮೀನಿಗೆ ಪ್ರವೇಶಿಸಿ, ಅಲ್ಲಿ ಮೇಯುತ್ತಿದ್ದ ಮೇಕೆಯ ಮೇಲೆ ತೀವ್ರವಾಗಿ ದಾಳಿ ನಡೆಸಿದೆ.ದಾಳಿ ಸಂಭವಿಸುತ್ತಿದ್ದ ಸಂದರ್ಭದಲ್ಲಿ, ಮೇಕೆಯ ಪಾಲಕರಾದ ನಾಗಣ್ಣ ಅವರು ಸಮೀಪದಲ್ಲೇ ಇದ್ದು, ತಕ್ಷಣವೇ ಚಿರಾಟ ನೀಡಿ ಚಿರತೆಯನ್ನು ಓಡಿಸಲು ಯತ್ನಿಸಿದರು. ಭಯಗೊಂಡ ಚಿರತೆ ಅಲ್ಲಿಂದ ಓಡಿ ಹೋಗಿದ್ದು, ಹೆಚ್ಚಿನಹಾನಿತಪ್ಪಿದೆ ಆದರೂ ಕೂಡ ಮೇಕೆಯೂ ಸ್ಥಳದಲ್ಲಿಅಸುನೀಗಿದೆ