ಶಿರಹಟ್ಟಿ: ತಹಶೀಲ್ದಾರ ಅನಿಲ್ ಬಡಿಗೇರ ಅವರ ಮನವಿಗೆ ಸ್ಪಂದಿಸಿ ಮತದಾನ ಬಹಿಷ್ಕಾರ ಹಿಂಪಡೆದ
ಕೋಗನೂರು ಗ್ರಾಮಸ್ಥರು
ತಾಲೂಕಿನ ಕೋಗನೂರಿಗೆ ಅನ್ಯಾಯ ಮಾಡಲ್ಲ ಪ್ರಾಮಾಣಿಕತೆಯಿಂದ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತೇನೆ ಕೋಗನೂರು ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಹಿಂಪಡೆಯಿರಿ ಎಂದು ಶಿರಹಟ್ಟಿ ತಹಶೀಲ್ದಾರ ಗ್ರಾಮಸ್ಥರ ಮನವೊಲಿಸಿದರು.ಜಿಲ್ಲೆಯ ಸಿಪಿಓ, ಶಿರಹಟ್ಟಿ ತಹಶೀಲ್ದಾರ್ ಅನಿಲ್ ಬಡಿಗೇರ ಹಾಗೂ ARO. ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಕೋಗನೂರ ಪಂಚಾಯಿತಿಗೆ ಭೇಟಿ ಕೊಟ್ಟು ಸಂಧಾನದ ಸಭೆ ನಡೆಸಿದರು.