ಸಿಂಧನೂರು: ಶ್ರೀಪುರಂ ಜಂಕ್ಷನ್ ಬಳಿ 300 ಕ್ವಿಂಟಲ್ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶ; ತನಿಖೆ ಕೈಗೊಂಡ ಖಾಕಿ
ಪಡಿತರ ಅಕ್ಕಿಯನ್ನು ಖರೀದಿಸಿ ಅಕ್ರಮವಾಗಿ ಸಾಗಿಸಲು ಯತ್ನಿಸಿದಾಗ ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್ ಬಳಿ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿ ಸುಮಾರು ರೂ.6.6 ಲಕ್ಷ ಮೌಲ್ಯದ 300 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆದ ಘಟನೆ ಸೆ.21 ರ ಭಾನುವಾರ ಸಂಜೆ ನಡೆದಿದೆ. ಸತೀಶ ಆದೋನಿ ಕರ್ನೂಲ್, ಲಾರಿ ಮಾಲೀಕ ಹಾಗೂ ಚಾಲಕ ಮೊಹ್ಮದ್ ಅಫ್ತಾಬ್ ಕೋರಾಜಿಯಾ ಎನ್ನುವವರ ವಿರುದ್ದ ಆಹಾರ ಇಲಾಖೆ ಅಧಿಕಾರಿ ಹನುಮೇಶ ಬಾಳಪ್ಪ ಅವರು ನೀಡಿದ ದೂರಿನನ್ವಯ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರು ಸಿಂಧನೂರು, ಸಿರಗುಪ್ಪಾ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರು ನ್ಯಾಯಬೆಲೆ ಅಂಗಡಿಯಿಂದ ತೆಗೆದುಕೊಂಡು ಬಂದ ಪಡಿತರ ಅಕ್ಕಿಯನ್ನು ಕೆಜಿಗೆ 15 ರೂ.