ರಾಮನಗರ: ಕೃಷಿ ಭೂಮಿ ರಕ್ಷಣೆಗೆ ಬೇಸತ್ತು ವಿಷ ಕುಡಿದ ರೈತನ ವಿರುದ್ಧವೆ ಬಿಡದಿ ಪೊಲೀಸರಿಂದ ಪ್ರಕರಣ ದಾಖಲು
ಕೃಷಿ ಭೂಮಿ ಬಿಟ್ಟು ಕೊಡಲು ಒಪ್ಪದೆ ತನ್ನ ಭೂಮಿಯ ರಕ್ಷಣೆಗೆ ಬೇಸತ್ತು ವಿಷ ಕುಡಿಯಲು ಮುಂದಾದ ರೈತನ ವಿರುದ್ದವೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿರುವ ಘಟನೆ ನಡೆದಿದೆ. ಬೈರಮಂಗಲ ಗ್ರಾಮದಲ್ಲಿ ಜಿಬಿಡಿಎ ಯ ಭೂಸ್ವಾಧೀನ ವಿರೋಧಿಸಿ ರೈತರು ಧರಣಿ ನಡೆಸುತ್ತಿದ್ದಾರೆ. ಮಂಗಳವಾರವು ಕೂಡ ಧರಣಿ ನಡೆಸುತ್ತಿದ್ದರು. ಈ ವೇಳೆ ಚಿಕ್ಕ ಬೈರಮಂಗಲ ಗ್ರಾಮದ ನಾಗೇಶ್ ಕುಮಾರ್ ವಿಷ ಸೇವನೆ ಮಾಡಿದ್ದ ಈತನನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಬಿಡದಿ ಪೊಲೀಸರು ಮಂಗಳವಾರ ರಾತ್ರಿ ಇದೇ ರೈತನ ವಿರುದ್ಧ ದೂರನ್ನ ದಾಖಲು ಮಾಡಿದ್ದಾರೆ.