ರಾಯಚೂರು ತಾಲೂಕಿನ ಸರಕಾರಿ ಪ್ರೌಢಶಾಲೆ , ಉಡಮಗಲ್ ಖಾನಾಪುರಕ್ಕೆ ಇಂದು ಭೇಟಿ ನೀಡಿದ ರಾಯಚೂರಿನ ತಹಶೀಲ್ದಾರಾದ ಸುರೇಶ್ ವರ್ಮ ಅವರು ಎಸ್ ಎಸ್ ಎಲ್ ಸಿ ಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ ಕುರಿತು ಮಾತನಾಡಿದರು. ಅವರು ವಿವಿಧ ಮಹನೀಯರ ಗಣ್ಯರ ಸಾಧನೆ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾದ ಮಾತುಗಳನ್ನು ಹೇಳಿದರು. ನಾನು ಸಹ ಒಂದು ಸಾಮಾನ್ಯ ಕುಟುಂಬದಿಂದ ಬಂದವನು ಶಾಲಾ ಶಿಕ್ಷಕನಾಗಿ ಶಾಲಾ ಮುಖ್ಯ ಗುರುಗಳಾಗಿ ಕಾರ್ಯವನ್ನ ನಿರ್ವಹಿಸಿದ್ದೇನೆ. ಹಾಗಾಗಿ ಈ ಶಾಲೆ ವಿದ್ಯಾರ್ಥಿ 625 ಅಂಕಗಳಿಗೆ 625 ಅಂಕಗಳನ್ನು ಗಳಿಸಿದರೆ ಆ ವಿದ್ಯಾರ್ಥಿಗೆ ನಾನು ಒಂದು ತೊಲೆ ಬಂಗಾರ ಕೊಡುವುದಾಗಿ ಘೋಷಣೆ ಮಾಡಿ ತಮ್ಮ ಶಿಕ್ಷಣ ಪ್ರೇಮ ವಿದ್ಯಾರ್ಥಿಗಳ ಅಭಿಮಾನ, ಶಿಕ್ಷಣದ ಕಾಳಜಿಯನ್ನ ಎತ್ತಿ ತೋರಿಸಿದರು.