ಹನೂರು: ನಾಲ್ ರೋಡ್ ಬಳಿ ಜೀಪ್-ಬೈಕ್ ಡಿಕ್ಕಿ ಬಳಿಕ ಅರಣ್ಯ ಸಿಬ್ಬಂದಿ ಪರಾರಿ :ರೈತ ಸಂಘದ ಆಕ್ರೋಶ
ಹನೂರು :ತಾಲೂಕಿನ ನಾಲ್ರೋಡ್ ಬಳಿ ಅರಣ್ಯ ಇಲಾಖೆಯ ಜೀಪ್ ಹಾಗೂ ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಬಳಿಕ ಜೀಪ್ನಲ್ಲಿ ಪ್ರಯಾಣಿಸುತ್ತಿದ್ದ ಸಿಬ್ಬಂದಿ ಗಾಯಾಳುಗಳಿಗೆ ನೆರವು ನೀಡದೇ ಸ್ಥಳದಿಂದ ಪರಾರಿಯಾದರೆಂಬ ಆರೋಪದ ಮೇಲೆ ಸ್ಥಳೀಯರು ಹಾಗೂ ರೈತ ಸಂಘದ ಸದಸ್ಯರು ನಾಲ್ ರೋಡ್ ಬಳಿ ಪ್ರತಿಭಟನೆ ನಡೆಸಿದರು. ನಾಲ್ ರೋಡ್ ಸಮೀಪ ನೆಡೆದ ರಸ್ತೆ ಅಪಘಾತದಲ್ಲಿ ನಾಲ್ರೋಡ್ನ ಕ್ಲಿಂಟನ್ ನೆಲ್ಸನ್ ಇಬ್ಬರು ಯುವಕರು ಕಾಲು ಮುರಿತಕ್ಕೊಳಗಾಗಿದ್ದಾರೆ ಈ ಹಿನ್ನಲೆ ಪ್ರತಿಭಟನೆ ನೆಡೆಸಿದ ರೈತ ಸಂಘಟನೆಯು ಅರಣ್ಯ ಇಲಾಖೆಯ ಸಿಬ್ಬಂದಿ ಮಾನವೀಯತೆ ತೋರದೆ ನಿರ್ಲಕ್ಷ್ಯ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು