ದಾವಣಗೆರೆ: ಡಿಕೆ ನಿಷೇಧದ ನಡುವೆಯೂ ಅದ್ದೂರಿ ಹಿಂದೂ ಮಹಾಗಣಪತಿ ಮೆರವಣಿಗೆ ಆರಂಭ: ಸ್ಪೀಕರ್, ಡೊಳ್ಳಿನ ಸದ್ದಿಗೆ ಕುಣಿದು ಕುಪ್ಪಳಿಸುತ್ತಿರಯವ ಯುವ ಪಡೆ
ದಾವಣಗೆರೆ ನಗರದಲ್ಲಿ ಎಂಟನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಆರಂಭವಾಗಿದೆ. ಡಿಜೆ ನಿಷೇಧದ ನಡುವೆಯೂ ಅದ್ದೂರಿಯಾಗಿಯೇ ವಿಸರ್ಜನಾ ಮೆರವಣಿ ಆರಂಭವಾಗಿದ್ದು, ಜನ ಸಾಗರವೇ ಹರಿದು ಬರುತ್ತಿದೆ. ಡಿಜೆ ಇಲ್ಲದಿದ್ದರೇನು ಆರ್ಕೆಸ್ಟ್ರಾ ಸ್ಪೀಕರ್ ಗಲಿಗೆ ಹೆಜ್ಜೆ ಹಾಕುತ್ತೇವೆ ಎಂದು ಯುವಕ ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದಾರೆ. ನಂದಿಕೋಲು, ಸಮಳ, ಗಾರುಡಿ ಗೊಂಬೆಗಳು, ಚಂಡೆ, ನಾಸಿಕ್ ಡೋಳು, ಡೊಳ್ಳು, ವೀರಗಾಸೆ, ಸೋಬಾಮ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದಿವೆ. ಒಟ್ಟಾರೆ ಡಿಜೆ ಇಲ್ಲದಿದ್ದರೆ ಮೆರವಣಗೆಗೆ ಜೋಷ್ ಇರುವುದಿಲ್ಲ ಎಂಬ ಮಾತು ಸುಳ್ಳಾಗಿದ್ದು, ಗಣಪನಿಗೆ ಭರ್ಜರಿಯಾಗಿಯೇ ವಿಧಾಯ ಹೇಳಲಾಗುತ್ತಿದೆ.