ಚಿಂಚೋಳಿ: ದಸ್ತಾಪುರ ಗ್ರಾಮದಲ್ಲಿ ಘೋರ ದುರಂತ: ತಲೆ ಮೇಲೆ ಟ್ರ್ಯಾಕ್ಟರ್ ಹರಿದು ಬಾಲಕ ದುರ್ಮರಣ
ಕಲಬುರಗಿ : ಚಿಂಚೋಳಿ ತಾಲೂಕಿನ ದಸ್ತಪುರ ಗ್ರಾಮದಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಕಬ್ಬು ತುಂಬಿದ ಟ್ರ್ಯಾಕ್ಟರ್ ಶಾಲಾ ಬಾಲಕನ ತಲೆಯ ಮೇಲೆ ಹರಿದು ಮೃತಪಟ್ಟಿದ್ದಾನೆ.. ಸೈಯದ್ ಜಹೀರ್ ಮಿಯಾ(11) ಮೃತ ದುದೈವಿ.. ದಸ್ತಪುರ್ ಗ್ರಾಮದ ಉರ್ದು ಶಾಲೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕ ಶಾಲೆ ಬಿಟ್ಟ ನಂತರ ಮನೆಯ ಕಡೆಗೆ ಹೋಗುತ್ತಿದ್ದಾಗ ವೇಗವಾಗಿ ಬಂದ tractor ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಹಿಂಬದಿಯ ಚಕ್ರಕ್ಕೆ ಸಿಲುಕಿ ತಲೆಯ ಮೇಲೆ ದಾಳಿ ಹೈದ ಪರಿಣಾಮವಾಗಿ ಬಾಲಕನು ಮೃತಪಟ್ಟಿದ್ದಾನೆ ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ