ದಾಂಡೇಲಿ : ಕಾಡಾನೆಗಳ ಹಿಂಡೊಂದು ದಾಳಿ ನಡೆಸಿ ಭತ್ತದ ಬಣವೆ ನಾಶ ಪಡಿಸಿದ ಘಟನೆ ದಾಂಡೇಲಿ ತಾಲೂಕಿನ ಆಲೂರಿನಲ್ಲಿ ಶುಕ್ರವಾರ ಸಂಜೆ 7.30 ಗಂಟೆ ಸುಮಾರಿಗೆ ನಡೆದಿದೆ. ಆಲೂರಿನ ದೇವೇಂದ್ರ ಬೆಳ್ಳಿಕಟ್ಟಿ ಎಂಬವರ ಹೊಲಕ್ಕೆ ದಾಳಿ ನಡೆಸಿದ ಕಾಡಾನೆಗಳ ಹಿಂಡೊಂದು ಅವರ ಭತ್ತದ ಬಣವೆಯನ್ನು ನಾಶ ಪಡಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.