ಜಗಳೂರು: 1008 ಜೋಡಿ ರೈತರ ಮಕ್ಕಳಿಗೆ ಉಚಿತ ಮದುವೆ: ಪಟ್ಟಣದಲ್ಲಿ ರಾಜ್ಯ ರೈತೋದಯ ಹಸಿರು ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಚಂದ್ರಶೇಖರ್
ಚಿತ್ರದುರ್ಗದಲ್ಲಿ ಡಿ.7, 2025 ರಂದು 1008 ಜೋಡಿ ಬಡ ರೈತ ಮಕ್ಕಳ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು, ನವ ವಧು-ವರರ ಜೋಡಿಗಳು ನೊಂದಾವಣೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ ಟಿ ಚಂದ್ರಶೇಖರ್ ಹೇಳಿದರು. ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ 4 ಗಂಟೆಗೆ ರಾಜ್ಯ ರೈತೋದಯ ಹಸಿರು ಸೇನೆ ಸಂಘಟನೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ 800 ಕ್ಕೂ ಅಧಿಕ ಜೋಡಿಗಳು ನೊಂದಣಿಯಾಗಿವೆ. ನೂತನ ವಧು-ವರರಿಗೆ ಸೀರೆ, ಬಟ್ಟೆ, ತಾಳಿ, ಕಾಲುಂಗುರ, 10ಸಾವಿರ ಮೌಲ್ಯದ ಬಂಡೆ ಸಾಮಾನು ಉಚಿತವಾಗಿ ವಿತರಿಸಲಾಗುವುದು ಎಂದರು.