ಕೋಲಾರ: ಡಿಸಿಸಿ ಬ್ಯಾಂಕ್ನಲ್ಲಿ ಅಕ್ರಮ ಹಣಕಾಸು ವ್ಯವಹಾರ, ಹಿರಿಯ ಸಹಾಯಕ ನಾಗರಾಜ್ ಅಮಾನತು
Kolar, Kolar | Nov 30, 2025 ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಕೋಲಾರ ಶಾಖೆಯಲ್ಲಿನ ಅಕ್ರಮ ಹಣಕಾಸು ವ್ಯವಹಾರ ಆರೋಪದಡಿ ಹಿರಿಯ ಸಹಾಯಕ ನಾಗರಾಜ್ (ಪ್ರಸ್ತುತ ನಗದು ಗುಮಾಸ್ತ್ರ) ಅವರನ್ನು ಅಮಾನತ್ತುಗೊಳಿಸಲಾಗಿದೆ. ಕರ್ತವ್ಯ ಲೋಪ, ಅಧಿಕಾರ ದುರುಪಯೋಗದ ಹಿನ್ನೆಲೆಯಲ್ಲಿ ಬ್ಯಾಂಕ್ನ ಪ್ರಭಾರ ಸಿಇಒ ವೆಂಕಟೇಶಪ್ಪ ಈ ಆದೇಶ ಹೊರಡಿಸಿದ್ದಾರೆ. ಕೋಲಾರ ಶಾಖೆಯಲ್ಲಿನ ಠೇವಣಿದಾರನ ಖಾತೆ ಸಂಖ್ಯೆಗೆ ಆತನ ಬೇಡಿಕೆ ಮೇರೆಗೆ 35 ಲಕ್ಷ ಮೊತ್ತವನ್ನು ಶಾಖೆಯ ಪ್ರಭಾರ ವ್ಯವಸ್ಥಾಪಕಿಯಾಗಿದ್ದ ಕೆ.ಎಸ್.ಅಶ್ವಿನಿ ಅವರೊಂದಿಗೆ ಶಾಮೀಲಾಗಿ ಅನಧಿಕೃವಾಗಿ ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ.