ಕುರುಗೊಡು: ಬಸಾಪುರ ಗ್ರಾಮದ ಎಂ.ಬಿ.ಬಿ.ಎಸ್. ವಿದ್ಯಾರ್ಥಿನಿಗೆ ಶಾಸಕರ ಸಹಾಯ ಭರವಸೆ
ಕುರುಗೋಡು ತಾಲೂಕಿನ ಬಸಾಪುರ ಗ್ರಾಮದ ವಿದ್ಯಾರ್ಥಿನಿ ರಾಧ (ತಂದೆ ಮರಿ ತಾಯಪ್ಪ) ಅವರು ಬಳ್ಳಾರಿಯ ವಿನ್ಸ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿದ್ದಾರೆ, ಅರ್ಥಿಕ ಸಹಾಯಕ್ಕಾಗಿ ಶಾಸಕ ಗಣೇಶ್ ಭರವಸೆ ಸೆ.25, ಗುರುವಾರ ಮಧ್ಯಾಹ್ನ 1 ಗಂಟೆಗೆ ಕಂಪ್ಲಿಯ ಶಾಸಕರ ಗೃಹ ಕಛೇರಿಯಲ್ಲಿ ಶಾಸಕರು, ವಿದ್ಯಾರ್ಥಿನಿ ರಾಧ ಅವರ ವಿದ್ಯಾಭ್ಯಾಸಕ್ಕಾಗಿ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದರು. “ಮುಂದಿನ ಐದು ವರ್ಷಗಳಲ್ಲಿ ನಿನಗೆ ಬೇಕಾದ ಸಹಾಯವನ್ನು ನಾನು ಮಾಡಿಕೊಡುವೆ,” ಎಂದು ಶಾಸಕರು ರಾಧಗೆ ಧೈರ್ಯ ತುಂಬಿದರು.