ಮದಕರಿಪುರ ಗ್ರಾಮದ ಹೊಸ ಹೈವೇ ಬಳಿ ಆಟೋ ಬೈಕ್ ಮಧ್ಯೆ ಅಪಘಾತ ನಡೆದು ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದ್ದು ಬೈಕ್ ಸವಾರ ಗಂಬೀರವಾಗಿ ಗಾಯಗೊಂಡಿದ್ದು ಆತನನ್ನ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಗುರುತು ಇನ್ನೂ ಪತ್ತೆಯಾಗಬೇಕಿದೆ. ಇನ್ನೂ ಬುಲೆಟ್ ಬೈಕ್ ನಲ್ಲಿ ತೆರಳುತ್ತಿದ್ದ ಬೈಕ್ ಸವಾರ ಮುಂದೆ ಹೋಗುತ್ತಿದ್ದ ಆಟೋ ಗೆ ಡಿಕ್ಕಿ ಹೊಡೆದಿದ್ದು ಕೆಳಗೆ ಬಿದ್ದ ಬೈಕ್ ಸವಾರ ಗಂಬೀರವಾಗಿ ಗಾಯಗೊಂಡಿದ್ದು ಕೂಡಲೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿಗಳು ಆತನನ್ನ ಉಪಚರಿಸಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ